ಬೀಳುಭೂಮಿ , ಪಾಳುಜಾಗ, ರಸ್ತೆಬದಿಗಳಲ್ಲಿ ಬೆಳೆಯುವ ಕಳೆಗಿಡದಂತೆ ಕಾಣುವ ಸಸ್ಯ , ಕ್ರೋಟಾರಿಯ ಪಲ್ಲಿಡ ( ) ಇದರ ಸಸ್ಯಶಾಸ್ತ್ರೀಯ ಹೆಸರು . ಇದನ್ನು ಎಂದು ಇಂಗ್ಲೀಷಿನಲ್ಲಿ ಕರೆಯುತ್ತಾರೆ . == ಮೂಲ == ಆಫ್ರಿಕಾದಿಂದ ಈ ಸಸ್ಯ ಭಾರತಕ್ಕೆ ಬಂದಿದೆ. == ವಿವರಣೆ == ಇದರ ಒಣ ಕಾಯಿಗಳಿಂದ ಗಿಜಿಗಿಜಿ ಶಬ್ದ ಉಂಟಾಗುತ್ತದೆ. ಪ್ರತಿ ಎಲೆಯು ಅಂಡಾಕಾರವಾಗಿದ್ದು ಬುಡದಲ್ಲಿ ಮೂರು ಕಿರು ಎಲೆಗಳಿರುತ್ತವೆ. ಕಾಂಡದ ತುದಿಯಲ್ಲಿ ಗೋಪುರದಂತೆ ಹಲದಿ ಹೂಗಳು ಇರುತ್ತವೆ. ಕಾಯಿಗಳು ಗೊಂಚಲುಗಳಲ್ಲಿದ್ದು ಪ್ರತಿ ಕಾಯಿಯು ೪-೫ ಸೆ.ಮೀ. ಉದ್ದ ಇದ್ದು ಒಳಗೆ ಗಾಳಿಯೂ ೨೦-೩೦ ಬೀಜಗಳೂ ಇರುತ್ತವೆ. ಸಸ್ಯದ ಉದ್ದ ೨-೩ ಅಡಿ. ಹೂವುಗಳು ಮತ್ತು ಕಾಯಿಗಳ ಕಾಲ ಜುಲೈನಿಂದ ಜನವರಿವರೆಗೆ. == ಉಪಯೋಗ == ಕಜ್ಜಿ ರೋಗವನ್ನು ವಾಸಿ ಮಾಡುತ್ತದೆ